Wednesday, January 7, 2009

ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಿದಹಾಗೆ

ಮನೆಗೆ ಮಗ ತಾಯಿಗೆ ತವರು

ಮಾಡಿದ್ದಕ್ಕೆ ಮನವೇ ಸಾಕ್ಷಿ ತೋಡಿದ್ದಕ್ಕೆ ಜಾಲವೇ ಸಾಕ್ಷಿ

ಮಂತ್ರಕ್ಕಿಂತ ಉಗುಳೇ ಹೆಚ್ಚು

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವೇನು

ಮನೆ ದೀಪ ಹಚ್ಚು ಅಂದರೆ ಮನೆ ದೀಪಾನೆ ಆರಿಸಿದರಂತೆ

ಸುಂಕದವನ ಹತ್ತಿರ ದುಃಖ ತೋಡಿಕೊಂಡಹಾಗೆ

ಸಮುದ್ರದ ಕಡೆ ನಡಯುವ ನದಿಯಹಾಗೆ

ಸಂಕಟ ಬಂದಾಗ ವೆಂಕಟರಮಣ

ಹುಲಿಯಿಂದ ತಪ್ಪಿಸಿಕೊಳ್ಳಲು ತಿಳಿಯದೆ ಹುಲಿಯ ಮೇಲೆ ಸವಾರಿ ಮಾಡಿದಹಾಗೆ

ಹುರಿಯೋ ಬಾಣಲೆಇಂದ ಉರಿಯೋ ಬೆಂಕಿಗೆ ಬಿದ್ದಹಾಗೆ

ಹೆತ್ತವರ ಮಾತು ಕೇಳಬೇಕು ಹಿರಿಯರ ಮಾತು ಪಾಲಿಸಬೇಕು

ಹಣೆ ಬರಹಕ್ಕೆ ಹೊಣೆ ಯಾರು

ಹೆಂಡ ಕುಡಿದ ಮಂಗನತರ ಆಡಿದಹಾಗೆ

ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ

ಕಹಿಯೊಳಗೆ ಸಿಹಿನಂಟು

ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಹಾಗೆ

ವಿಷದ ಮುಳ್ಳನ್ನು ಅರ್ದಕ್ಕೆ ಮುರಿಯಬೇಕು

ಎತ್ತಿಗೆ ಜ್ವರ ಬಂದರೆ ಕೋಣಾಗೆ ಬರೆ ಹಾಕಿದರಂತೆ

ಎಂಜಲಾಸೆಗೆ ಎಲೆ ಎತ್ತಿದರಂತೆ

ನಿಂತ ನೆಲ ಬಾಯಿ ಬಿಟ್ಟಹಾಗೆ

ನಡಿಯೋ ಹಾದಿಗೆ ಮುಳ್ಳು ಹಾಕಿದರಂತೆ

ಬೇಡಿ ಉಂಡ ಬಾಯಿ ನಾಡ ಕಂಡೀತು

ಬಂಡ ಬದುಕಿದ ಚಲಗಾರ ಕೆಟ್ಟ

ಬಯ್ದು ಹೇಳಿದವರು ಬದುಕೋಕ್ಕೆ ನಗುತ್ತ ಹೇಳಿದವರು ನಾಶವಾಗುವುದಕ್ಕೆ

ಬರಗಾಲದಲ್ಲಿ ಮಗ ಮೊಸರು ಉಣ್ಣಲು ಕಲಿತನಂತೆ

ಬೆಟ್ಟದ ಮೇಲಿಂದ ದಬ್ಬಿಆಮೇಲೆ ವ್ಯೆತೆ ಪಟ್ಟಹಾಗೆ

ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ

ಬೆಂಬಿಡದ ಬೂತ ಇದ್ದಹಾಗೆ

ತಗ್ಗಿದರೆ ತಲೆ ಬಡೀತಾರೆ ಎತ್ತಿದರೆ ಕಾಲು ಹಿಡಿಕೋತಾರೆ

ತಾನೊಂದು ಬಗೆದರೆ ಧಯ್ವ ಇನ್ನೊಂದು ಬಗೆದಹಾಗೆ

ತನ್ನ ಮನೆ ಬಾಗಿಲನ್ನು ಇತರರಿಗೆ ಕೊಟ್ಟು ಇಡೀ ರಾತ್ರಿ ನಾಯಿ ಓಡಿಸಿದನಂತೆ

ತಡೆದು ಕೊಳ್ಳಲಾರದವನು ಹಿಡಿದು ಕೊಂಡು ಸತ್ತನಂತೆ

ದುರ್ಬಿಕ್ಷದಲ್ಲಿ ಅದಿಕಮಾಸ

ಚಾಟಿ ಇಲ್ಲದೆ ಬುಗುರಿ ಆಡಿಸಿದಹಾಗೆ

ಚಿತೆ ಮನುಷ್ಯನನ್ನು ಸುಡುತ್ತೆ ಚಿಂತೆ ಮನಸ್ಸನ್ನು ಸುಡುತ್ತೆ

ಜಟ್ಟಿ ಜಾರಿದರು ಮೀಸೆ ಮಣ್ಣಾಗಲಿಲ್ಲವಂತೆ

ಕುರಿ ಹಿಂದೆ ಕುರಿಮಂದೆ ಹೋದಹಾಗೆ

ಕಾಲಿಗೆ ಚುಚ್ಚಿದ ಮುಳ್ಳನ್ನು ಬುಡ ಸಮೇತ ಕಿತ್ತೊಗೆಯಬೇಕು

ಕೆಸರಿನಲ್ಲಿರುವ ಕಮಲದಂತೆ

ಕೆಸರಿನಲ್ಲಿ ಶ್ರೀಗಂದ ಚೆಲ್ಲಿದಹಾಗೆ

ಕಬ್ಬಿಣ ಬಿಸಿಯಿರುವಾಗಲೇ ತಟ್ಟಬೇಕು

ಕನಸು ಕಾಣೋದಿಕ್ಕೇ ಕಾಸು ಕರ್ಚು ಮಾಡಬೇಕಾ

ಕೆಂಡವನ್ನು ಮುಂದಿಟ್ಟುಕೊಂಡು ಕಾಲ ಕಳೆದಹಾಗೆ

ಕಾಣದಲೇ ಸ್ವರ್ಗನ ಕಟ್ಟಿಕೊಂಡು ಕಾಣೋ ಸ್ವರ್ಗನ ಬಿಡಕ್ಕೆ ಆಗುತ್ತಾ

ಗಂಟು ಉಳಿಬೇಕು ನಂಟು ಉಳಿಬೇಕು

ಉಪಾಯ ಬಲ್ಲವನಿಗೆ ಅಪಾಯವಿಲ್ಲ

ಉರಿಯುವ ಗಾಯಕ್ಕೆ ಉಪ್ಪು ಸುರಿದ ಹಾಗೆ

ಉಂಡೆಲೆ ಎತ್ತೋ ಗುಂಡ ಅಂದರೆ ಉಂಡವರೆಷ್ಟು ಜನ ಅಂದನಂತೆ

ಯಾರದೋ ತಲೆ ಮೇಲೆ ಗೂಬೆ ಕೂರಿಸಿದಹಾಗೆ

ಯಾರ್ ಏನ್ ಮಾಡಿದರು ಅದು ನಮ್ಮ ಉಪಕಾರಕ್ಕೆ

ರಾಜನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲ