Monday, November 17, 2008

ಗುರುವಿಗೆ ತಿರುಮಂತ್ರ ಹಾಕಿದ ಹಾಗೆ

ಮೀನು ಹಿಡಿಯೋಣ ಅಂತ ಸಮುದ್ರಕ್ಕೆ ಇಳಿದರೆ ಹವಳನೆ ಸಿಕ್ಕಿದ ಹಾಗೆ

ಎರಡು ದೋಣಿಯಲ್ಲಿ ಪ್ರಯಾಣ ಮಾಡಿದಹಾಗೆ

ಸಯ್ತಾನನಿಗೆ ರಾಮ ರಾಮ ಅಂದರೆ ಸರಿಹೊಗೊದಿಲ್ಲವಂತೆ

ರಾಜನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲ

ಮೂರಕ್ಕೆ ಹೋಗಲ್ಲ ನಾಲ್ಕಕ್ಕೆ ಬರೋಲ್ಲ

ಅಳಿಯ ಅಲ್ಲಾ ಮಗಳ ಗಂಡ ಅಂದ ಹಾಗಾಯಿತು

ಇದ್ದುದ್ದು ಇಲಿ ಕಚ್ಚಿಕೊಂಡು ಹೋಯಿತು

ಮೇಲೆ ಬಿದ್ದ ಸೂಳೆಗೆ ಮೂರು ಕಾಸಿಗೂ ಬೆಲೆಯಿಲ್ಲ

ಮಾಡಿದವರ ಪಾಪ ಹೇಳಿದವರ ಬಾಯಲ್ಲಿ

ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವಾ?

ನೂರು ಜನ ಸೇರಿ ಒಂದು ಮೀಸೆ ಬಗ್ಗಿಸಬಹುದು ಒಂದು ಜಡೇನ ಬಗ್ಗಿಸುವುದಕ್ಕೆ ಆಗುವುದಿಲ್ಲ

ಕಾಣದಲೇ ಸ್ವರ್ಗ ಕಟ್ಟಿಕೊಂಡು ಕಾಣೋ ಸ್ವರ್ಗನ ಬಿಡಕ್ಕೆ ಆಗುತ್ತಾ?

ಕಂಡು ಕಂಡು ಗಂಡು ಮಗುನಾ ಅಂದರಂತೆ

ಕುರಿ ಕಾಯೋದಿಕ್ಕೆ ತೋಳನ ಬಿಟ್ಟಹಾಗಯ್ತು

ಕುದುರೆ ಇದೆ ಮೈದಾನನು ಇದೆ

ಕೆರೆಯ ನೀರನು ಕೆರೆಗೆ ಚೆಲ್ಲಿದಹಾಗೆ

ಬೆಂಕಿ ಜೊತೆಯಲ್ಲಿ ಸರಸ ಆಡಿದಹಾಗೆ

ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆ ಆಯಿತಂತೆ

ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆ ಆಇತಂತೆ

ದನ ತಿನ್ನುವವನಿಗೆ ಗೊಬ್ಬರದ ಆಣೆ

ಯುದ್ದ ಕಾಲದಲ್ಲಿ ಶಸ್ತ್ರಾಬ್ಯಾಸ

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ

ಯತಾ ರಾಜ ತತಾ ಪ್ರಜಾ

ಪಾಲಿಗೆ ಬಂದಿದ್ದು ಪಂಚಾಮೃತ

ಪುಸ್ತಕದ ಬದನೆಕಾಯಿ ಹಸ್ತಕ್ಕೆ ಬಂದೀತೆ

ಪೂರ್ಣ ಪ್ರೇಮವೇ ಪ್ರಬಲ ಆತ್ಮಬಲ

ಪಾಪಿಯ ಕಣ್ಣಿಗೆ ರೂಪುವುಳ್ಳ ವಸ್ತು ತೋರಬಾರದು

ಪಾಪಿ ಸುಮುದ್ರಕ್ಕೆ ಹೋದರು ಮೊಣಕಾಲುದ್ದ ನೀರು

ರೀತಿ ಕೆಟ್ಟರು ಪಲವಿರಬೇಕು

ರಾತ್ರಿಯಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ರಾಮನಿಗೂ ಸೀತೆಗೂ ಏನು ಸಂಬಂದ ಅಂದನಂತೆ

ರಾಮೇಶ್ವರಕ್ಕೆ ಹೋದರು ಶನೇಶ್ವರನ ಕಾಟ ತಪ್ಪಲಿಲ್ಲವಂತೆ

ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಹಾಗೆ

ಹಾವಿಗೆ ಹಾಡು ಹೇಳಿದರೆ ಕಚ್ಚೋ ಗುಣಾನ ಬಿಡುತ್ತಾ?

ಹೆತ್ತವಳ ಹತ್ತಿರ ಹೇಳಿಕೊಲ್ಹೊದಿಕ್ಕೆ ಆಗುವುದಿಲ್ಲ ಕೊಟ್ಕೊಂಡವ ಳನ್ನು ಕಳೆದುಕೊಳ್ಳುವುದಕ್ಕೆ ಆಗುವುದಿಲ್ಲ

ಹುಚ್ಚು ಬಿಡೋತನಕ ಮದುವೆಯಾಗಲ್ಲ ,ಮಾಡುವೆ ಆಗೋತನಕ ಹುಚ್ಚು ಬಿಡಲ್ಲ

ಹೆಗ್ಗಣ ದೇಶಾಂತರಕ್ಕೆ ಹೋದರು ನೆಲ ಕೊರೆಯೋದು ತಪ್ಪೋದಿಲ್ಲಂತೆ

ಹದ್ದು ಹದ್ದು ಕಾದ ಕಾದ ರುಚಿ ಕಾದು ಕಾದು ಕಯ್ ಹಿಡಿದ ಹೆಂಡತಿ ಪ್ರೀತಿ ರುಚಿ

ಹಾವನೊಡಿದು ಹದ್ದಿಗೆ ಹಾಕಿದಹಾಗೆ

ಹೆಂಗಸರ ಬುದ್ದಿ ಮೊಣಕಾಲುದ್ದ

ಹೆಂಗಸಿಗೆ ಸೊಂಟ ಗಟ್ಟಿ ಗಂಡಸಿಗೆ ಎದೆ ಗಟ್ಟಿ

Friday, November 14, 2008

ಹಿಂದಿದ್ದವಳು ಮುಂದು ಬಂದು ಬಿದ್ದರೆ

ಹೇಳಿದ್ದೆ ಹೇಳೋ ಕಿಸ್ಪಯ್ಯದಾಸ

ಹೂವಿನಿಂದ ನಾರು ಸ್ವರ್ಗಕ್ಕೆ ಹೋಯಿತಂತೆ

ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ

ಹಣ್ಣೆಲೆ ಚಿಗುರಿದಾಗ

ಹೋದೆಯ ಪಿಶಾಚಿ ಅಂದರೆ ಬಂದೆನಾ ಗವಾಕ್ಷಿ

ಹುರಿಯುವ ಬಾಣಲೆಯಿಂದ ಜಾರಿ ಉರಿಯುವ ಬಲೆಗೆ ಬಿದ್ದಂತೆ

ಹೊಸನೀರು ಬಂದು ಹಳೆ ನೀರು ಕೊಚ್ಚಿಕೊಂಡು ಹೋಯಿತು

ಹೇಳುವವನು ಹೆಡ್ದನಾದರೆ ಕೇಳುವವನು ಕೆಪ್ಪನಾ

ಹುತ್ತದೊಳಗೆ ಕೈ ಇಟ್ಟಹಾಗೆ

ಹನ್ನೊಂದು ತಿಂಗಳು ಇದ್ದವನು ಇನ್ನೊಂದು ತಿಂಗಳು ಇರೋದಿಲ್ಲವಾ

ಹಾಲಿಗೆ ಬಂದವನಿಗೆ ಎಮ್ಮೆಯ ಕ್ರಯವೇಕೆ

ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು

ಹಣ್ಣಾಗುವ ಕಾಯಿಯನ್ನು ಹೀಚಿನಲ್ಲಿ ನೋಡು

ಹಾರುವನಿಗೆ ಆಳಾಗಬೇಡ ಗಾಣಿಗನಿಗೆ ಎತ್ತಾಗಬೇಡ

ಹೇಳುವುದು ಶಾಸ್ತ್ರ ಹಾಕುವುದು ಗಾಳ

ಹೊಟ್ಟೆ ವುರಿಯುವ ಮಾತಿಗೆ ಸಿಟ್ಟೇಕೆ

ಹಾಲು ಕುಡಿದವನೇ ಬದುಕಲಿಲ್ಲ ಇನ್ನು ವಿಷ ಕುಡಿದವನು ಬದುಕುತ್ತಾನ

ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು

ಹುಣಸೆ ಮುಪ್ಪಾದರೆ ಹುಳಿ ಮುಪ್ಪೆ

ಹಗಲು ಹೆಂಡಿರ ಕಾಟ ಇರುಳು ತಿಗಣೆ ಕಾಟ

ಹೆತ್ತು ಸಾಕಬೇಕು ಉತ್ತು ಬೆಳೆಸಬೇಕು

ಹಾಲಿದ್ದಾಗಲೇ ಹಬ್ಬ

ಹದಿನಾರರ ಹೆಣ್ಣು ಅಪ್ಸರೆ

ಹರಿಶ್ಚಂದ್ರನ ಮೊಮ್ಮಗ

ಹೆತ್ತವರಿಗೆ ಹೆಗ್ಗಣ ಮುದ್ದು ಕೊಟ್ಕೊಂಡವನಿಗೆ ಕೋಡಂಗಿ ಮುದ್ದು

ಹುಟ್ಟುವಾಗ ಅಣ್ಣ ತಮ್ಮಂದಿರು ಬೆಳಿತ ಬೆಳಿತಾ ದಾಯಾದಿಗಳು

ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ

ಹೋಗ್ತೀನಿ ಹೋಗ್ತೀನಿ ಅಂತ ಏಳು ಕೋಳಿ ತಿಂದು ಹೋದರಂತೆ

ಹಲ್ಲಿದ್ದವನಿಗೆ ಕಡ್ಲೆ ಇಲ್ಲ ಕಡ್ಲೆ ಇದ್ದವನಿಗೆ ಹಲ್ಲಿಲ್ಲ

ಹುಚ್ಚು ಮುಂಡೆ ಮದುವೇಲಿ ಉಂಡೌನೆ ಜಾಣ

ಹಿರಿಯಕ್ಕನ ಚಾಳಿ ಮನೆಮನೆಗೆಲ್ಲಾ

ಹೇಳುವುದು ಆಚಾರ ಮಾಡುವುದು ಅನಾಚಾರ

ಹಾಳೂರಿಗೆ ಉಳಿದವನೆ ಗೌಡ

ಹಿತ್ತಲ ಗಿಡ ಮದ್ದಲ್ಲ

ಹಾವಿಗೆ ಹಾಲೆರೆದಹಾಗೆ

ಹೊಳೆಯಲ್ಲಿ ಹುಣಿಸೇಹಣ್ಣು ಕಿವಿಚಿದಹಾಗೆ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ

ಹೆಣ್ಣಿಗೆ ಪಾರುಪತ್ಯ ಕೊಟ್ಟರೆ ಮೊಣಕಾಲುದ್ದ

Thursday, November 13, 2008

ಹಣ್ಣು ತಿಂದವನು ಜಾರಿಕೊಂಡ ಸಿಪ್ಪೆ ತಿಂದವನು ಸಿಕ್ಕಿಹಾಕಿಕೊಂಡ

ಹಣ ಅಂದರೆ ಹೆಣನು ಬಾಯಿ ಬಿಡುತಂತೆ

ಹಾಲು ಕುಡಿದವನೇ ಬದುಕಲಿಲ್ಲ ಇನ್ನು ವಿಷ ಕುಡಿದವನು ಬದುಕುತ್ತಾನಾ

ಹಾಲಿಗೆ ಬರ ಅಂದರೆ ನೀರಿಗೆ ಬರನಾ

ಬೆಟ್ಟ ಹತ್ತಿದ ಮೇಲೆ ಅಟ್ಟ ಹತ್ತೋದು ಕಷ್ಟಾನ

ಬಂಡೆಗೆ ತಲೆ ಚಚ್ಚಿಕೊಂಡ ಹಾಗೆ

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಹಾಗೆ

ಬೆರಳು ತೋರಿಸಿದರೆ ಹಸ್ಥಾನೆ ನುಂಗಿದರಂತೆ

ಬೇಲಿನೆ ಎದ್ದು ಹೊಲ ಮೇಯ್ದಹಾಗೆ

ಬಾಷೆ ತಪ್ಪಿದವ ದೇಶ ತಪ್ಯಾನು

ಬಿತ್ತಿದ್ದನ್ನು ಬೆಳೆದುಕೊ

ಬೆಳ್ಳಗಿರುವುದೆಲ್ಲಾ ಹಾಲಲ್ಲ ಹೊಳೆವುದೆಲ್ಲಾ ಚಿನ್ನವಲ್ಲ

ಬಾಯಲ್ಲಿ ಸವಿಮಾತು ಬಗಲಲ್ಲಿ ಕತ್ತಿ

ಬಾಯಿಇದ್ದವನ ಬದುಕು ಚೆಂದ

ಬಡವನಿಗೆ ಆಸೆ ತೋರಿಸಬೇಡ ಧನಿಕನಿಗೆ ಬಾಷೆ ಕೊಡಬೇಡ

ಬಾಯಿಯಲ್ಲಿ ಬಾಮಗ ಹೊಟ್ಟೆಯಲ್ಲಿ ಸೂಳೆಮಗ

ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗಯ್ಗು ಗೊತ್ತಾಗ ಬಾರದಂತೆ

ಬೇಲಿನೆ ಎದ್ದು ಹೊಲ ಮೇಯ್ದ ಹಾಗೆ

ಬೆನ್ನು ಹತ್ತಿದ ಬೇತಾಳನ ತರ

ಬೆಳೆವ ಪೈರು ಮೊಳಕೆಯಲ್ಲಿ ನೋಡು

ಬೋಗ ಅತಿಯಾದರೆ ರೋಗವೇ ಗತಿ

ಬಿಸಿಯಾಗದೆ ಬೆಣ್ಣೆ ಕರಗದು

ಬೆಂಕಿ ಇಲ್ಲದೆ ಹೊಗೆ ಇಲ್ಲ ಚಿದ್ರವಿಲ್ಲದ ಸಂಸಾರವಿಲ್ಲ

ಬಣ್ಣದ ತಟ್ಟಿಗೆ ಮರುಳಾಗಿ ಸುಣ್ಣದ ಗೋಡೆ ಕೆಡವಿದರಂತೆ

ಬಾದರಾಯಣನ ಸಂಬಂದದಿಂದ ನೀವು ನೀವೇ ನಾವು ನಾವೇ

ಬಿಟ್ಟಿ ಅಂದರೆ ನನಗು ಇರಲಿ ನನ್ನ ಅಪ್ಪನಿಗೂ ಇರಲಿ ದುಡ್ಡು ಅಂದರೆ ನನಗು ಬೇಡ ನನ್ನ ಮೊಮ್ಮಕ್ಕಳಿಗೂ ಬೇಡ ಅಂದನಂತೆ

ಬಾಯಿ ಬಿಟ್ಟರೆ ಬಂಡ್ ಗೇಡು

ಬೊಗೊಲೋ ನಾಯಿ ಕಚ್ಚುವುದಿಲ್ಲ ಕಚ್ಚೋ ನಾಯಿ ಬೊಗಳುವುದಿಲ್ಲ

ಬಾಯಿ ಇದ್ದವನು ಬರಗಾಲದಲ್ಲೂ ಬದುಕಿದ

ಬಿಳಿ ಸೀರೆ ವುಟ್ಟವ ಳೆಲ್ಲಾ ನನ್ನ ಹೆಂಡತಿ ಅಂದನಂತೆ

ಬಡವನ ಮನೆ ಊಟ ಚೆಂದ ಶ್ರೀಮಂತನ ಮನೆ ನೋಟ ಚೆಂದ

ಬಿದ್ದೋಗ ಮಾತು ಎದ್ದೋಗಲಿ

ಬಡವನ ಕೋಪ ದವಡೆಗೆ ಮೂಲ

ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು

ಬಂಗಾರದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲು ಆಗುತ್ತಾ?

ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣಸಂಕಟ

ಬೂದಿ ಮುಚ್ಚಿದ ಕೆಂಡದ ಹಾಗೆ

ನಾಯಿ ಬಾಲಕ್ಕೆ ದಬ್ಬೆ ಕಟ್ಟಿದಹಾಗೆ

ನಾಯಿ ಮೊಲೆಯಲ್ಲಿ ಹಾಲಿದ್ದಹಾಗೆ

ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡಂತೆ

ನೆಂಟರೊಳಗಣ ಸಾಲ ಮೆಟ್ಟಿನೋಳಗಣ ಕಲ್ಲು ನಿತ್ಯ ನೊವ್ವು ಕೊಡುತ್ತದೆ

ನಾಲಿಗೆಗೆ ನೊವ್ವಿಲ್ಲ ಹರಟೆಗೆ ಹಿಡಿತವಿಲ್ಲ

ನೀರಗನ್ನಿನವರು ಊರ ಹಾಳುಮಾಡುವರು

ನಾಯಿಗು ಆನೆಗೂ ಬಾಂದವ್ಯವೇ

ನಾರಿ ಕೆಟ್ಟರೆ ಊರಿಗೆ ಮಾರಿ

ನೀರು ಹೋರುವ ಬಡ್ಡಿಗೆ ಊರ ಪಾರಪಥ್ಯವೇಕೆ

ನೀರಿನಲ್ಲಿ ಹೋಮ ಮಾಡಿದಹಾಗಾಯಿತು

ನೀರಿನಲ್ಲಿ ಮುಳಿಗಿದವನಿಗೆ ಚಳಿಯೇನು ಬಿಸಿಲೇನು

ನಾಯಿಗೆ ಹೇಳಿದರೆ ನಾಯಿ ಬಾಲಕ್ಕೆ ಹೇಳಿತಂತೆ

ನಾರಿ ಮುನಿದರೆ ಮಾರಿ

ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ

ನಾಯಿ ಬಾಲ ಡೊಂಕು

ನಾಯಿನ ಪಲ್ಲಕ್ಕಿಮೇಲೆ ಕೂರುಸಿದಹಾಗೆ

ದುಡ್ಡಿದ್ದವರ ಮುಂದೆ ಜಗತ್ತೇ ತಲೆ ಬಗ್ಗಿಸಿ ನಡಿಯುತ್ತೆ ದುಡ್ಡಿಲ್ಲದೆ ಹೋದರೆ ಹುಲ್ಲು ಕೂಡ ಹಾವಿನಹಾಗೆ ಬುಸುಗುಟ್ಟುತ್ತೆ

ದುಡ್ಡಿದ್ದವರ ಮುಂದೆ ಜಗತ್ತೇ ತಲೆ ಬಗ್ಗಿಸಿ ನಡಿಯುತ್ತೆ

ದುಡ್ಡಿದ್ದವರ ಮಕ್ಕಳಿಗೆ ಬುದ್ದಿ ಇಲ್ಲ ಬುದ್ದಿ ಇರೋ ಮಕ್ಕಳಿಗೆ ದುಡ್ಡಿಲ್ಲ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

ದೊರೆಯನ್ನು ಎದುರಿಗೆ ಹೊಗಳಬೇಕು ಮಕ್ಕಳನ್ನು ಮರೆಯಲ್ಲಿ ಹೊಗಳಬೇಕು

ದೇಶಾಂತರ ಹೋದರು ಸ್ವಾತಂತ್ರವಿರಬೇಕು

ದೇಶಾಂತರ ಹೋದರು ಸ್ವಾತಂತ್ರವಿರಬೇಕು

ದಾಸ್ಯದ ಊಟಕಿಂತ ಸ್ವಾತಂತ್ರ್ಯದ ನೀರೆ ಲೇಸು

ದನದ ಮುಂದೆ ಹೋಗಬೇಡ ಕುದುರೆ ಹಿಂದೆ ಬಾಗಬೇಡ

ದಿನಾ ಸಾಯುವವರಿಗೆ ಅಳುವವರು ಯಾರು

ಧನವಿಲ್ಲದ ಮನುಷ್ಯ ನಾಯಿ ಇಲ್ಲದ ಮನೆ ಬೆಂಕಿ ಇಲ್ಲದ ಒಲೆ ವ್ಯರ್ಥ

Wednesday, November 12, 2008

ದಾಸಗೆ ಬಯವಿಲ್ಲ ವೆಶ್ಯಗೆ ಕರುಣವಿಲ್ಲ

ದುಡಿವವರಿಗೆ ದುಕ್ಕವಿಲ್ಲ ಸೋಮಾರಿಗೆ ಸುಖವಿಲ್ಲ

ದಾರಿಯ ಮಾರಿ ಮನೆಗೆ ಕರೆದಂತೆ

ದೂರದ ಹೆಣ್ಣಿಗಿಂತ ಹತ್ತಿರದ ಮಿಡಿಲೇಸು

ದೀಪ ಕಂಡು ಮೋಹಿಸಿ ಪತಂಗ ಬಂದು ಬಿದ್ದಂತೆ

ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲವಂತೆ

ದಾನಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮಳ ಹಾಕಿದರಂತೆ

ದುಡ್ಡೇ ದೊಡ್ಡಪ್ಪ

ತೊಟ್ಟಿಲು ತೂಗೋದು ಮಗೂನು ಚಿವುಟೋದು

ತಿಪ್ಪೆಇಂದ ಉಪ್ಪರಿಗೆಗೆ ಬಂದರೆ ಮನುಷ್ಯ ಬದಲಾಗುತ್ತಾನೆ

ತನ್ನ ಗೋರಿನ ತಾನೆ ತೋಡಿಕೊಂಡ ಹಾಗೆ

ತಾಯಿಗೆ ಮಗುವು ಬಾರವೇ ಬಳ್ಳಿಗೆ ಕಾಯಿ ಬಾರವೇ

ತಣ್ಣೀರನ್ನದರು ತಣಿಸಿ ಕುಡಿಯಬೇಕು

ತಾನು ತೋಡಿದ ಹಳ್ಳಕ್ಕೆ ತಾನೆ ಬಿದ್ದಂತೆ

ತುಪ್ಪದ ಆಸೆಗೆ ಎಂಜಲು ತಿಂದರಂತೆ

ತಾಯಿ ಕಂಡರೆ ತಲೆ ಬೇನೆ

ತೋಟ ಸಿಂಗಾರ ಒಳಗೆ ಗೋಳಿಸೊಪ್ಪು

ತಾಯಿಯಂತೆ ಮಕ್ಕಳು ನೂಲಿನಂತೆ ಸೀರೆ

ತಾಯಿ ಸತ್ತರೆ ತಂದೆ ಮನೆಯಲ್ಲಿ ನಿಲ್ಲಬಾರದು ಮಳೆ ನಿಂತ ಮೇಲೆ ಮರದಡಿ ನಿಲ್ಲಬಾರದು

ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತು

ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ

ತಾನು ಮಾಡ ಮಾಡುವವರಿಗೆ ಬಿಡ

ತಾಗಿ ಬಾಗುವುದಕಿಂತ ಬಾಗಿ ನಡೆವುದೇ ಲೇಸು

ತಿಂದು ಕೆಡಬೇಡ ಕೆಟ್ಟು ಪಟ್ನ ಸೇರಬೇಡ

ತಿಂದು ಉಂಡು ತಿಮ್ಮೆ ದೇವರ ಕಾಟವಂತೆ

ತೀರ್ಥ ತೆಗೆದುಕೊಂಡರೆ ಸೀತ ಮಂಗಳಾರತಿ ತೆಗೆದುಕೊಂಡರೆ ಉಷ್ಣ

ತುಂಬಿದ ಕೊಡ ತುಳುಕುವುದಿಲ್ಲ

ತಾನು ಮಾಡುಉದು ಉತ್ತಮ ಮಗ ಮಾಡುಉದುಮದ್ಯಮ ಆಳು ಮಾಡುವುದು ಹಾಳು

ಲಂಗನಂ ಪರಮೌಶದಂ

ಲಂಚ ಕೊಟ್ಟು ಮಂಚ ಹತ್ತು

ಚಂಚಲತೆಯೇ ವಿನಾಶ ದ್ರುಡತೆಯೇ ವಿಕಾಸ

ಚಾಡಿ ಮಾತಿನಿಂದ ಚಾವಡಿ ಕೆಟ್ಟಿತು

ಚಾಪೆ ಕೆಳಗೆ ನುಸಿಳಿದೆ ಅಂದರೆ ರಂಗೋಲಿ ಕೆಳಗೆ ನುಸಿಳಿದೆ ಅಂದರಂತೆ

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ

Tuesday, November 11, 2008

ಜಟ್ಟಿ ಜಾರಿದರು ಮೂರು ಪಟ್ಟು ಅಂದನಂತೆ

ಜನ ಮರಳೋ ಜಾತ್ರೆ ಮರಳೋ

ಜಗಲಿ ಹಾರಿ ಗಗನ ಹಾರಬೇಕು

ಜನರಿಗೆ ಅಂಜಿ ನಡೆಯದಿದ್ದರೆ ಮರ್ಯಾದಿಗೆ ಅಂಜಿ ನಡೆ

ಜೀನ ಗಳಿಸಿದನ್ನು ಜಾಣ ಉಂಡ

ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು

ಅನ್ನ ಹಾಕಿದ ಮನೆ ಕೆಡೋಕಿಲ್ಲ ಗೊಬ್ಬರ ಹಾಕಿದ ಹೊಲ ಹಾಳಾಗಕಿಲ್ಲ

ಆಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ

ಆನೆಗೆ ಆನೆ ಹೋಗ್ತಾ ಇದ್ದರೆ ಆನೆ ಬಾಲ ಹಿಡಿದು ಕೊಂಡರಂತೆ

ಆಕಾಶಕ್ಕೆ ಏಣಿ ಹಾಕಿದ ಹಾಗೆ

ಆಳು ಮಾಡಿದ ಕೆಲಸ ಹಾಳು

ಅತೀ ಆಸೆ ದುಕ್ಕಕ್ಕೆ ಕಾರಣ

ಆನೆಗೆ ಸಾಲುತ್ತ ಆರು ಕಾಸಿನ ಮಜ್ಜಿಗೆ

ಅವ್ವನು ಬೇಕು ಬುವ್ವನು ಬೇಕು

ಅತಿ ಸರ್ವ್ರತ್ರ ವರ್ಜಯೇತ್

ಅಡಿಕೆ ಕದ್ದರು ಕಳ್ಳ ಆನೆ ಕದ್ದರು ಕಳ್ಳನೇ

ಅತಿವಾದಕ್ಕೆ ಪ್ರಥಿವಾದವಿಲ್ಲ

ಅಡಿ ನೋಡಿ ಮುಡಿ ಹೊರಬೇಕು

ಆಳ ನೋಡಿ ಹಾರು ಗಾಳಿ ನೋಡಿ ತೂರು

ಅರಸನ ಮುಂದಿರಬೇಡ ಕತ್ತೆ ಹಿಂದಿರಬೇಡ

ಆಟದ ಹೊತ್ತಿಗೆ ಆಟ ಪಾಠದ ಹೊತ್ತಿಗೆ ಪಾಠ

ಅಪ್ಪನ ಸಂಗಡ ಪೇಟೆ ಅಮ್ಮನ ಸಂಗಡ ಊಟ

ಆಡಿದಂತೆ ಮಾಡಿದವ ರೂಡಿಯಲ್ಲಿ ಉತ್ತಮ ಮಾಡದವ ಮಾದಿಗ

ಅಂಗೈ ಹುಣ್ಣಿಗೆ ಕನ್ನಡಿ ಬೇಕಾ

ಅಳೋ ಗಂಡನ ನಂಬಬಾರದು ನಗೋ ಹೆಣ್ಣನ್ನು ನಂಬಬಾರದು

ಅಗಸನಿಗೇಕೆ ಅರಸನ ಚಿಂತೆ

ಅನ್ನ ಹಳಿಸಿತ್ತು ನಾಯಿ ಹಸಿದಿತ್ತು

ಅಗಸ ಹೊಸದರಲ್ಲಿ ಗೋಣಿ ಚೀಲ ಎತ್ತಿ ಎತ್ತಿ ಒಗೆದನಂತೆ

ಅಪ್ಪ ಹಾಕಿದ ಆಲದ ಮರಕ್ಕೆ ಮಗ ನೇಣು ಹಾಕಿಕೊಂಡ್ನಂತೆ

ಅವಸರದಲ್ಲಿ ಮುದುಕಿ ಮೈನೆರೆದಳಂತೆ

ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳೇ

ಅಜ್ಜಿ ನೂತಿದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ

ಆಸೆ ಅರವತ್ತು ದಿನ ಮೋಹ ಮುವ್ವತ್ತು ದಿನ

ಅಮ್ಮಾವರು ಹೆತ್ತಾಗ ಅಯ್ಯನವರಿಗೆ ಕಯ್ಲಾಸ

ಆರು ಹೆತ್ತವಳಿಗೆ ಮೂರು ಹೆತ್ತವಳು ಕಲಿಸಿದಂತೆ

ಅಂಗಾಲಿಗೆ ಹೇಸಿಗೆ ಇಲ್ಲ ಕರುಳಿಗೆ ನಾಚಿಕೆ ಇಲ್ಲ

ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ ಒಂದೇ

ಆಡುವ ಮಗುವನ್ನು ಕಾಡುವ ಮಗುವಿಗೆ ಕೊಟ್ಟಂತೆ

ಅತ್ತೆಯ ತುರುಬನ್ನು ಮಾವನಿಗೆ ದಾನ ಮಾಡಿದಂತೆ

ಕಣ್ಣೆದುರಿಗೆ ಇಟ್ಟಿಕೊಂಡು ಕಾಡಿಗೆಹೋಗಿ ಹುಡಿಕಿದರಂತೆ

ಕಬ್ಬು ಸಿಹಿಯಾಗಿದೆ ಎಂದು ಬೇರು ತನಕ ತರಿದು ಬಿಡೋದೇ

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ

ಕೊಂಕಣ ಸುತ್ತಿ ಮೈಲಾರಕ್ಕೆ ಹೋದಹಾಗೆ

ಕಳ್ಳನಿಗೆ ಒಂದು ಪಿಳ್ಳೆ ನೆವ

ಕಂತೆಗೆ ಒಂದು ಬಂತೆ

ಗಿಳಿನ ಸಾಕಿ ಗಿಡುಗನ ಕೈಗೆ ಕೊಟ್ಟಹಾಗೆ

ಗೋರ್ಕಲ್ಲ ಮೇಲೆ ಮಳೆ ಸುರಿದಹಾಗೆ

ಗಂಡ ಕುಡುಕನಾದರೂ ಪರವಾಗಿಲ್ಲ ಕಟುಕನಾಗಬಾರದು

Friday, November 7, 2008

ಎಲೆ ಮರೆಯ ಕಯಿಯ ಹಾಗೆ

ಎಡ ಕಿವಿಯಲ್ಲಿ ಕೇಳಿ ಬಲ ಕಿವಿಯಲ್ಲಿ ಬಿಟ್ಟಂತೆ

ಎಂಜಲು ಕಯಲ್ಲಿ ಕಾಗೆನು ಓಡಿಸೋಲ್ಲವಂತೆ

ಏತಿ ಅಂದರೆ ಪ್ರೇತಿ ಅಂದರಂತೆ

ಎಣ್ಣೆ ಬರುವಾಗ ಕಣ್ಣು ಮುಚ್ಹಬಾರದು ಬೆಣ್ಣೆ ಬರುವಾಗ ಹೊರಗೆ ಹೋಗಬಾರದು

ವಿನಾಶ ಕಾಲೇ ವಿಪರೀತ ಬುದ್ದಿ

ವಯಸ್ಸಾದಮೇಲೆ ವೇಶ್ಯ ಪತಿವ್ರತೆ ಆದಳಂತೆ

ಒಬ್ಬರಿಗಿಂತ ಇಬ್ಬರು ಮೇಲು

ಓಡಿ ಹೋದ್ರು ಕೇಡು ತಪ್ಪದು

ಇಕ್ಯ ಮತವೇ ಲೋಕ ಹಿತವು

ಸೇರಿಗಿನಲ್ಲಿ ಬೆಣ್ಣೆ ಕಟ್ಟಿಕೊಂಡ್ ಹಾಗೆ

ಹೊಟ್ಟೆಯಲ್ಲಿ ಇಲಿ ಓಡಾಡಿಧಹಾಗೆ

Thursday, November 6, 2008

ಇಕ್ಕುವವಳು ನಮ್ಮವಳಾದರೆ ಕೊಟ್ಟಿಗೆಯಲ್ಲದರು ಉಂಡ್ಹೆನು

ಇತ್ತ ದರಿ ಅತ್ತ ಪುಲಿ

ಈಚಲ ಮರದ ಕೆಳಗೆ ಕೂತು ಮಜ್ಜಿಗೆ ಕುಡಿದಹಾಗೆ

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಏಕೆ ?

ಋಣದ ಕೂಳು ತಿನ್ನಬಾರದು ಸಾಲಗಾರನ ಆಳ್ಥಾನಕ್ಕೆ ಖ್ಯಗೂಡಬಾರದು

ಉದ್ದ (ಅಬದ್ದ) ಮಾತಿಗೆ ಗುದ್ದೇ ಮದ್ದು

ಉಂಡ ಮನೆಗೆ ಯರಡು ಬಗೆದ ಹಾಗೆ

ಊಟಕ್ಕೆ ಮೊದಲಿರು ಸ್ನಾನಕ್ಕೆ ಹಿಂದೆ ಇರು

ಊದುವ ಶಂಖ ಊದಿಬಿಟ್ಟರೆ ಶಿವಪೂಜೆ ಆದರೇನು? ಬಿಟ್ಟರೇನು ?

ಉದರ ನಿಮಿತ್ತಂ ಬಹುಕೃತ ವೇಷಂ

ಉರಿಯೋ ಬೆಂಕಿಗೆ ತುಪ್ಪ ಸುರಿದಹಾಗೆ

ಶಂಕದಿಂದ ಬಂದರೇನೆ ತೀರ್ಥ

ಶಂಕದಿಂದ

ಶಂಕdinda

Wednesday, November 5, 2008

ಸುತ್ತಿ ಸುತ್ತಿ ಬಂದು ಬಾವಿಗೆ ಬಿತ್ತು

ಶಿವಪೂಜೆಯಲ್ಲಿ ಕರಡಿ ಬಂದಹಾಗೆ

ಸಂತೆಯಲ್ಲಿ ಮಳೆ ಸುರಿದಾಗ ಉಪ್ಪಿನವನು ಅತ್ತನೆಂದು ತೆಂಗಿನ ಕಾಇಯವನು ತಾನು ಅತ್ತಂತೆ

ಶಾಸ್ತ್ರ ನೋಡಿ ಶಾಸ್ತ್ರ ಮಾಡಿ

ಶಸ್ತ್ರಾ ಕೇಳೋಕೆ ಬದನೆಕಾಯಿ ತಿನ್ನೋಕೆ

ಶತ್ರುವಿನ ಶತ್ರು ಮಿತ್ರ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು

ಸತ್ಯಮೇವ ಜಯತೇ

ಶಕ್ತಿಗಿಂತ ಯುಕ್ತಿ ಮೇಲು

ಸಾವಿರ ಆಡಿದರೂ ಸಾವಿರದ ಹತ್ತಕ್ಕೆ ಕಡಿಮೆ

ಸಮಯಕೊಂದು ಮಾತು ಸಾವಿರಕ್ಕಯ್ತು

ಸಿಕ್ಕಿದವರಿಗೆ ಸೀರುಂಡ

ಸೋದರ ಅತ್ತೆಗೆ ಮೀಸೆ ಬಂದರೆ ಚಿಕ್ಕಪ್ಪ ಯನ್ನಿಸಿ ಕೊಂಡ್ಲೆ

ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದಹಾಗೆ

ಸತಿಗೆ ಪಾತಿವ್ರಥ್ಯವೆ ಸ್ವರ್ಗ

ಸ್ತ್ರೀ ಸ್ವಾತಂತ್ರಲಾದರೆ ಪುರುಷ ಪರತಂತ್ರ

ಸಂಕಲ್ಪವಿಲ್ಲದ ಜೀವನ ವ್ಯರ್ಥ

ಸಂಕಲ್ಪವಿಲ್ಲದ ಜೀವನ ವ್ಯರ್ಥ

ಸಿರಿಯ ಮೆಚ್ಚಿ ಮೆರಿಯದಿರು ಬರಿಯ ಹೊತ್ತು ಕಳೆಯದಿರು

ಶೆಟ್ಟಿ ಶೃಂಗಾರ ಆಗೋದರಲ್ಲಿ ಪಟ್ನ ಹಾಳಾಗಿ ಹೋಇತು

ಶೆಟ್ಟಿ ಗೇನು ಕೆಲಸ ಅಳಿಯೋದು ಸುರಿಯೋದು

ಸೋಮ್ಬೇರಿಗೆ ಹಾಸಿಗೆ ಹಾಸು ಕೊಟ್ಟ ಹಾಗೆ

ಸೋಮ್ಬೇರಿಗೆ

Monday, November 3, 2008

ಸಂತೆಯಲ್ಲೊಂದು ಕುಂಟು ನಾಯಿ

ಸೇರಿಗೆ ಸವ್ವಾ ಸೇರು

ಸಾವಿರ ಕುದುರೆ ಸರದಾರ ಹೆಂಡತಿ ಮುಂದೆ ಗುಲಾಮ

ಮಾತಾಡಕ್ಕೆ ಹೋಗಿ ಮನೇನೆ ತಲೆಮೇಲೆ ಕೆಡವಿಕೊಂಡರಂತೆ

ಮೂರು ಕಾಸಿಗೆ ಹೋದ ಮಾನ ಆರು ಕಾಸು ಕೊಟ್ಟರು ಬರೋದಿಲ್ಲ

ಮೀನಾ ಮೇಷ ಯಣಿಸುವ್ದು

ಮೂರ್ಕನ ಮನಸ್ಸನ್ನು ಯಾರಿಂದಲೂ ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ

ಮೂಗು ಇರೋತನಕ ನೆಗಡಿ ತಪ್ಪಲ್ಲ

ಮನೆಯಲ್ಲಿ ಬೆಣ್ಣೆ ಇಟ್ಟಿಕೊಂಡು ತುಪ್ಪಕ್ಕೆ ಊರೆಲ್ಲ ಹುಡಿಕಿದರಂತೆ

ಮೂಳೆ ಇಲ್ಲದ ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ

ಮಾತಿನಲ್ಲಿ ಮನೆ ಕಟ್ಟಿದ ಹಾಗೆ

ಮೆಟ್ಟು ಮೆಟ್ಟಿದವನ ಹಿಂದೆ ನಡೆಯಬಾರದು ಕೋಲು ಹಿಡಿದವನ ಮುಂದೆ ನಡೆಯಬಾರದು

ಮಂಕು ಮಾತಾಡಿದರೆ ಮಂಕು ಅಂದಾರು

ಮುಂದನ್ನು ಯೋಚಿಸದವನಿಗೆ ಮೂರು ದಾರಿಯ ಮೊಣ್ಣು

ಮಳೆ ಬಂದಂತೆ ಕೊಡೆ ಹಿಡಿ

ಮೌನ ಬಂಗಾರ ಮಾತು ಬೆಳ್ಳಿ

ಮಂಗನ ಮೂತಿಗೆ ಮೊಸರನ್ನ ಮೆತ್ತಿದಹಾಗೆ

ಮಾತೆ ಮುತ್ತು ಮಾತೆ ಮ್ರುತ್ತ್ಯು

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು

ಮುಳ್ಳನ್ನು

ಮದುವೆಯಾಗೋ ಬ್ರಾಮ್ಹಣ ಅಂದರೆ ನೀನೆ ನನ್ನ ಹೆಂಡತಿ ಆಗು ಎಂದನಂತೆ

ಮದುವೆಯಾಗೋ ಬ್ರಾಮ್ಹಣ ಅಂದರೆ

ಮನೆಗೆ ಬಂದ ಲಕ್ಷ್ಮಿಯನ್ನು ಓಡಿದೊಡಿಸುಉದೆ

ಮನಸ್ಸಿದ್ದಲ್ಲಿ ಮಾರ್ಗ ಉಂಟು

ಮನವೇ ಗಂಗೆ ಮನೆಯೇ ಕಾಶಿ

ಮನಸ್ಸು ಗೆದ್ದರೆ ಮೂರು ಲೋಕ ಗೆದ್ದಂತೆ