Thursday, July 31, 2008

ಮಳ್ಳಿ ಮಳ್ಳಿ ಮಂಚಕ್ಕೆ ಯಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದಳಂತೆ

2 comments:

ವೀರಭದ್ರ said...

ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡದೆ, ತಾನು ಬುದ್ದಿವಂತೆ ಎಂದು ತೋರಿಸಿಕೊಳ್ಳುವ ಹುಮ್ಮಸ್ಸಿನಲ್ಲಿ, ಒಗಟು ಒಗಟಾಗಿ ಉತ್ತರಿಸುವ ಹುಡುಗಿಯರನ್ನು ಹಂಗಿಸಲು ಈ ಗಾದೆಯನ್ನು ಬೆಸೆಯಲಾಗಿದೆ.

ಗಾದೆಯ ಪದಗಳನ್ನೇ ನೋಡಿ: ಮಂಚಕ್ಕೆ ಎಷ್ಟು ಕಾಲು ಎನ್ನುವುದು ಎಷ್ಟು ಸರಳವಾದ ಪ್ರಶ್ನೆ!
ಅದಕ್ಕೂ ನೇರವಾಗಿ ಉತ್ತರಿಸದ 'ಮಳ್ಳಿ' ಮೂರು ಮತ್ತೊಂದು ಎಂದಿದ್ದಾಳೆ.

Unknown said...

ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವಳಿಗೆ ಅಥವಾ ಇಷ್ಟು ಸುಲಭದ ಪ್ರಶ್ನೆ ದಡ್ಡರಿಗೆ ಕೇಳುವತರಹ ತನಗೆ ಕೇಳುವದಾ ಎಂದು ತನ್ನ ಬುದ್ಧಿವಂತಿಕೆ ತೋರಿಸುವ ತರಹ ಮಾರುತ್ತರ ಕೊಡುವಳಿಗೆ ಈ ಗಾದೆಯನ್ನು ಹೇಳುವರು.
ಮಳ್ಳಿ ಎಂದರೆ ಮರೆಯುವವಳು ಎನ್ನುವದರ ಆಡುನುಡಿಯಾಗಿರಬಹುದು.